ವಿಷಯಕ್ಕೆ ಹೋಗು

ಸದಸ್ಯ:HPNadig: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚುNo edit summary
೩೪ ನೇ ಸಾಲು: ೩೪ ನೇ ಸಾಲು:


== ಅಂತರಜಾಲದಲ್ಲಿ ನನ್ನ ಪುಟಗಳು ==
== ಅಂತರಜಾಲದಲ್ಲಿ ನನ್ನ ಪುಟಗಳು ==
[http://hpnadig.net/ ಅಂತರಜಾಲದ ಮನೆ] | [http://hpnadig.net/blog/ ಪರಿವೇಷಣ - ನನ್ನ ಬ್ಲಾಗ್] | [http://conjurer.deviantart.com/ ಗಣಕದಿಂದ ತಯಾರಿಸಿದ ಕೆಲವು ಗ್ರಾಫಿಕ್ಸ್] | [http://hpnadig.blogspot.com/ ಅಂತರಜಾಲ ಸಂಪರ್ಕಗಳ ಬ್ಲಾಗ್] | [http://wikiupdate.blogspot.com/ ವಿಕಿಪೀಡಿಯಾದ ಬಗ್ಗೆ]
[http://hpnadig.net/ ಅಂತರಜಾಲದ ಮನೆ] | [http://hpnadig.net/blog/ ಪರಿವೇಷಣ - ನನ್ನ ಬ್ಲಾಗ್] | [http://conjurer.deviantart.com/ ಗಣಕದಿಂದ ತಯಾರಿಸಿದ ಕೆಲವು ಗ್ರಾಫಿಕ್ಸ್] | [http://www.hpnadig.blogspot.com/ ಅಂತರಜಾಲ ಸಂಪರ್ಕಗಳ ಬ್ಲಾಗ್] | [http://www.wikiupdate.blogspot.com/ ವಿಕಿಪೀಡಿಯಾದ ಬಗ್ಗೆ]


ಈ ಪುಟವನ್ನು ವೀಕ್ಷಿಸಿದ್ದಕ್ಕೆ ಧನ್ಯವಾದಗಳು!
ಈ ಪುಟವನ್ನು ವೀಕ್ಷಿಸಿದ್ದಕ್ಕೆ ಧನ್ಯವಾದಗಳು!

೧೮:೪೫, ೬ ಜೂನ್ ೨೦೦೫ ನಂತೆ ಪರಿಷ್ಕರಣೆ

Links | Contributions : kn : en : | Leave a Message
Home Page | Blog | Art Gallery | Contact me

ನಮಸ್ಕಾರ, ನೀವು ಹರಿ ಪ್ರಸಾದ್ ನಾಡಿಗ್ನ ಬಳಕೆದಾರ ಪುಟಕ್ಕೆ ಬಂದು ಸೇರಿದ್ದೀರಿ. . .

೭ ನವೆಂಬರ್ ೨೦೨೪


ಬೈ-Yo! (Bio) (ಹಾಗಂತ ಹೇಳಿ ಹೋಗ್ಬಿಡ್ಬೇಡಿ. ಬೋರು ಹೊಡ್ಸಲ್ಲ)
ನಾನಿರುವುದು ಬೆಂಗಳೂರಿನಲ್ಲಿ. ಶಿವಮೊಗ್ಗ ನಮ್ಮ ಊರು. ದಾವಣಗೆರೆಯಲ್ಲಿ ಹುಟ್ಟಿದ್ದಾದರೂ ಬೆಳೆದು ಬಂದದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ. ದಾವಣಗೆರೆಯ 'ಲಾರ್ಡ್ಸ್ ಬಾಯ್ಸ್ ಸ್ಕೂಲ್', ಚಿತ್ರದುರ್ಗದ 'ಜ್ಞಾನ ಭಾರತಿ', ಮೈಸೂರಿನ 'ಬಾಲೋದ್ಯಾನ', 'ಮರಿಮಲ್ಲಪ್ಪ ಶಾಲೆ', ಶಿವಮೊಗ್ಗದ 'ಡಿ.ವಿ.ಎಸ್ ಶಾಲೆ'ಗಳಲ್ಲಿ ನಾನು ಓದಿ ಬಂದದ್ದು. ಪಿ.ಯು ಮುಗಿಸಿದ್ದು ಡಿ.ವಿ.ಎಸ್. ಜೂನಿಯರ್ ಕಾಲೇಜಿನಲ್ಲಿ. ಕಂಪ್ಯೂಟರ್ ಸೈನ್ಸ್‌ (ಗಣಕ ವಿಜ್ಞಾನ?)ನಲ್ಲಿ ಬಿ ಇ ಮಾಡಿದ್ದು ಕರ್ನಾಟಕದ 'ವಿ.ಟಿ.ಯು'ನ ನೂರೆಂಟು ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಒಂದಾದ (ಪ್ರತಿ ಕಾಲೇಜಿನಂತೆಯೇ ಇರುವ ಮಗದೊಂದು) ಪ್ರೈವೇಟ್ ಕಾಲೇಜಿನಲ್ಲಿ.

ಸಾಕು ಬೋರ್ ಹೊಡ್ಸಿದ್ದು, ವಿಕಿಪೀಡಿಯಾಕ್ಕೆ ಬರೋಣ. ನಾನು ವಿಕಿಪೀಡಿಯಾಕ್ಕೆ ಬರೆಯಲು ಪ್ರಾರಂಭಿಸಿದ್ದು ಬಹುಶಃ ಆಗಸ್ಟ್ ೨೦೦೪ ರಲ್ಲಿ. ಕನ್ನಡದ ಅವತರಣಕ್ಕೆ ಇದುವರೆಗೆ ಸಾಕಷ್ಟು ಸೇರಿಸುವ ಪ್ರಯತ್ನ ಮಾಡಿದ್ದೇನೆ. ಸಂಪೂರ್ಣ ವಿಕಿಯ ಮರುನಿರ್ಮಾಣ ಮಾಡುವುದರಲ್ಲಿ, ಸಂಪಾದಕರನ್ನು ಒಟ್ಟುಗೂಡಿಸುವುದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದೇನೆ. ಸಾಧ್ಯವಾದಲ್ಲಿ ಸಮಯ ಕಲ್ಪಿಸಿದಂತೆ ವಿಶ್ವಕೋಶಕ್ಕೆ ಬರೆಯುವುದನ್ನು ಮುಂದುವರೆಸುವೆ. ಮತ್ತೆ ಬೋರ್ ಹೊಡ್ಸಿದ್ನೆ? ಪರ್ವಾಗಿಲ್ಲ, ಮತ್ತಷ್ಟು ಬೋರ್ ಹೊಡ್ಸ್ಕೊಳ್ಳೊ ಇರಾದೆ ಇದ್ರೆ ನನ್ನ ಬ್ಲಾಗ್] ನೋಡಿ. ;) ಆಗೀಗ ಕಂಡದ್ದು, ಕಂಡುಕೊಂಡಿದ್ದನ್ನ ಬರೀತಿರ್ತೇನೆ.


ಹವ್ಯಾಸಗಳು
ಚದುರಂಗ ಆಡ್ತೀನಿ... (ಹೌದ್ರೀ, ಚೆಸ್ಸು). ಸ್ವಲ್ಪ ದಿನ ಟೇಬಲ್ ಟೆನ್ನಿಸ್ ಆಡ್ತಾ ಇದ್ದೆ, ಶಾಲೆಯಲ್ಲಿ ನಾವಾಡ್ತಿದ್ದ ಟೇಬಲ್ಲೇ ಮುರ್ದ್‍ಹೋಯ್ತು, ತದನಂತರ ಬಿಟ್ಟುಬಿಟ್ಟೆ. ಕ್ರಿಕೆಟ್ ನೀಟಾಗಂತೂ ಆಡಲ್ಲ, ಅದಕ್ಕೇ ನೋಡ್ತೀನಿ. ದ್ರಾವಿಡ್ ಆಟ ನೋಡೋಕೆ ಚೆಂದ, ಆದ್ರೆ ಬರೀ ಕುಟ್ತಾರೆ. ಬೇಜಾರಾದಾಗ ವೆಬ್ ಡಿಸೈನ್ ಮಾಡ್ತೀನಿ, ವ್ಯಂಗ ಚಿತ್ರ ಬರೀತೀನಿ. ಕೆಲವೊಮ್ಮೆ ದುಡ್ಡು ಪೋಲು ಮಾಡಿ ಕ್ಯಾಮೆರ ಹಿಡಿದು ತಿರುಗ್ತಿದ್ದೆ.


ಇನ್ನು ನನ್ನ ಬಗ್ಗೆ ಹೇಳಿದ್ದಾಯ್ತು. ಈ ಪುಟ ಅದಕ್ಕೆ ಇರೋದು. ಆದ್ರೂ, ನಾವೆಲ್ಲಾ ಬೆಳೆಸಿರೋ ಕನ್ನಡ ವಿಕಿಯನ್ನ Promote ಮಾಡ್ತಾ ಇರೋದ್ರಿಂದ, (ಮೇಲಿಂದೇನೂ ಓದ್ಲಿಲ್ಲಾಂದ್ರೂ ಕೆಳಗಿನದ್ದನ್ನು ತಪ್ಪದೇ ಓದಿ :)

  • ಕನ್ನಡ ವಿಕಿಪೀಡಿಯಾ ಬೆಳೆಸುವುದಕ್ಕೆ ಸಹಾಯ ಮಾಡಲು ಉತ್ಸಾಹವಿದ್ದಲ್ಲಿ, ಬೆಳೆಸಲು ಹೊಸ Ideaಗಳು ಇದ್ದಲ್ಲಿ ಈ ಪುಟದಲ್ಲಿ ನಿಮ್ಮ ಸಂದೇಶ ರವಾನಿಸಿ. Mailing Listಗೆ ಕೂಡ ಬರೆಯಬಹುದು. ಅಲ್ಲಿ ಓದೋದು ಕೂಡ ಒಬ್ಬರೋ ಇಬ್ಬರೋ, ನಾವುಗಳೇ.

ನಾನು ಇದುವರೆಗೆ ವಿಕಿಪೀಡಿಯಾಕ್ಕೆ ಬರೆದ ಲೇಖನಗಳ, ಸಂಪಾದನೆಗಳ ಪಟ್ಟಿ ಇಲ್ಲಿ ತಯಾರಿಸುತ್ತಿರುವೆ, ವಿಕಿಪೀಡಿಯಾದಲ್ಲಿ ನಾನು ಸಮಯ ಪೋಲು ಮಾಡಿ ನೆರವೇರಿಸಿರುವ ಘನಕಾರ್ಯಗಳನ್ನು ನೋಡುವ Curiosity ಇದ್ದಲ್ಲಿ ಭೇಟಿ ಕೊಡಬಹುದು.

ಕೆಳಗಿನದ್ದು ನನ್ನ 'Reference'ಗೆ :)

ಕನ್ನಡಿಗರಿಗಾಗಿ ಕೆಲವು ಅಂತರಜಾಲ ಸಂಪರ್ಕಗಳು

ಅಂತರಜಾಲದಲ್ಲಿ ನನ್ನ ಪುಟಗಳು

ಅಂತರಜಾಲದ ಮನೆ | ಪರಿವೇಷಣ - ನನ್ನ ಬ್ಲಾಗ್ | ಗಣಕದಿಂದ ತಯಾರಿಸಿದ ಕೆಲವು ಗ್ರಾಫಿಕ್ಸ್ | ಅಂತರಜಾಲ ಸಂಪರ್ಕಗಳ ಬ್ಲಾಗ್ | ವಿಕಿಪೀಡಿಯಾದ ಬಗ್ಗೆ

ಈ ಪುಟವನ್ನು ವೀಕ್ಷಿಸಿದ್ದಕ್ಕೆ ಧನ್ಯವಾದಗಳು!

- ಹರಿಪ್ರಸಾದ್ ನಾಡಿಗ್ (ಫೆಬ್ರುವರಿ ೨೦೦೫)

Wikipedia, the free encyclopedia. If you are viewing it elsewhere, you may be visiting an outdated mirror. Please direct yourself to the real thing at http://en.wikipedia.org/wiki/User:Hpnadig
"https://kn.wikipedia.org/w/index.php?title=ಸದಸ್ಯ:HPNadig&oldid=6538" ಇಂದ ಪಡೆಯಲ್ಪಟ್ಟಿದೆ