ಕ್ರೂಶಾರೋಹಣ
ಕ್ರೂಶಾರೋಹಣವು (ಶಿಲುಬೆಗೇರಿಸುವುದು) ಮರಣದಂಡನೆಯ ವಿಧಾನವಾಗಿತ್ತು. ಇದರಲ್ಲಿ ತುತ್ತಾದವನನ್ನು ಕಟ್ಟಿಗೆಯ ಒಂದು ದೊಡ್ಡ ತೊಲೆಗೆ ಕಟ್ಟಿ ಅಥವಾ ಮೊಳೆ ಹೊಡೆದು ನಾಟಿಸಿ ಅಂತಿಮವಾಗಿ ಬಳಲಿಕೆ ಹಾಗೂ ಉಸಿರುಗಟ್ಟಿ ಸಾವು ಬರುವವರೆಗೆ ಬಹುಶಃ ಹಲವು ದಿನಗಳವರೆಗೆ ತೂಗಾಡಲು ಬಿಡಲಾಗುತ್ತಿತ್ತು.[೧][೨]
ಏಸು ಕ್ರಿಸ್ತನ ಕ್ರೂಶಾರೋಹಣವು ಕ್ರೈಸ್ತ ಧರ್ಮಕ್ಕೆ ಪ್ರಧಾನವಾಗಿದೆ ಮತ್ತು (ಕೆಲವೊಮ್ಮೆ ಇದಕ್ಕೆ ಕ್ರಿಸ್ತನನ್ನು ಮೊಳೆ ಹೊಡೆದು ಚಿತ್ರಿಸಲಾಗುವ) ಶಿಲುಬೆಯು ಅನೇಕ ಕ್ರೈಸ್ತ ಚರ್ಚುಗಳಿಗೆ ಮುಖ್ಯ ಧಾರ್ಮಿಕ ಸಂಕೇತವಾಗಿದೆ.
ಸಾಕ್ಷಿಗಳು ಅದೇ ರೀತಿಯ (ಸಾಮಾನ್ಯವಾಗಿ ವಿಶೇಶವಾಗಿ) ಘೋರ ಅಪರಾಧಗಳನ್ನು ಮಾಡುವುದನ್ನು ತಡೆಯಲು ಕ್ರೂಶಾರೋಹಣವನ್ನು ಹಲವುವೇಳೆ ನಡೆಸಲಾಗುತ್ತಿತ್ತು. ಈ ಶಿಕ್ಷೆಗೆ ತುತ್ತಾದವರನ್ನು ಬೇರೆ ಇತರ ಸಂಭಾವ್ಯ ಅಪರಾಧಿಗಳಿಗೆ ಎಚ್ಚರಿಕೆಯ ಸಂಕೇತವಾಗಿ ಕೆಲವೊಮ್ಮೆ ಮರಣದ ನಂತರ ಪ್ರದರ್ಶನಕ್ಕೆ ಬಿಡಲಾಗುತ್ತಿತ್ತು. ಸಾಮಾನ್ಯವಾಗಿ ವಿಶೇಷವಾಗಿ ನಿಧಾನವಾದ, ನೋವುಕೊಡುವ, ಭಯಂಕರ, ಅವಮಾನಕಾರಿ, ಮತ್ತು ಸಾರ್ವಜನಿಕ ಮರಣವನ್ನು ನೀಡುವುದು ಕ್ರೂಶಾರೋಹಣದ ಉದ್ದೇಶವಾಗಿರುತ್ತಿತ್ತು.
ಉಲ್ಲೇಖಗಳು
- ↑ Edwards, William D. (March 21, 1986). "On the Physical Death of Jesus Christ". JAMA. 255 (11): 1455–63. doi:10.1001/jama.1986.03370110077025. PMID 3512867.
- ↑ Byard, Roger W. (March 5, 2016). "Forensic and historical aspects of crucifixion". Forensic Science, Medicine, and Pathology. 12 (2): 206–208. doi:10.1007/s12024-016-9758-0.