ವಿಷಯಕ್ಕೆ ಹೋಗು

ಅಹರ್ಬಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಹರ್ಬಾಲ್ ಜಲಪಾತ

ಅಹರ್ಬಾಲ್ ಭಾರತೀಯ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಕಾಶ್ಮೀರ ಕಣಿವೆಯ ನೈಋತ್ಯ ಭಾಗದಲ್ಲಿ ಸ್ಥಿತವಾಗಿರುವ ಒಂದು ಗಿರಿಧಾಮವಾಗಿದೆ. ಸ್ಥಳ ಸಾಕಷ್ಟು ಶಾಂತಿಯುತವಾಗಿದ್ದು ಪರ್ಯಟನೆ, ಚಾರಣ, ವ್ಲಾಗಿಂಗ್, ಛಾಯಾಗ್ರಹಣ, ಮತ್ತು ಮೀನುಗಾರಿಕೆಗೆ ಸೂಕ್ತವಾಗಿದೆ. ಹುಲ್ಲುಗಾವಲುಗಳು, ಪೈನ್ ಮತ್ತು ಫರ್ ಮರದ ಕಾಡುಗಳು, ಹಿಮದಿಂದ ಆವೃತವಾದ ಪಕ್ಕದ ಪರ್ವತಗಳ ಸಮ್ಮೋಹನಗೊಳಿಸುವ ನೋಟದ ಕಾರಣ ಈ ಜಲಪಾತವು ಅನೇಕ ಭಾರತೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಹರ್ಬಾಲ್ ಜಲಪಾತವನ್ನು ಕಾಶ್ಮೀರದ ನಯಾಗರಾ ಜಲಪಾತ ಎಂದೂ ಕರೆಯುತ್ತಾರೆ.[]

ಅಹರ್ಬಾಲ್ ಜಲಪಾತ

[ಬದಲಾಯಿಸಿ]
ಅಹರ್ಬಾಲ್ ಜಲಪಾತ

ಇಲ್ಲಿ ವೇಶು ಹೊಳೆಯು ಶಬ್ದಮಾಡುತ್ತ ಗ್ರಾನೈಟ್ ಬಂಡೆಗಳ ಕಿರಿದಾದ ಕಮರಿಯ ಮೂಲಕ 25 ಮೀಟರ್ ಮತ್ತು ೭ ಮೀಟರ್ ಎತ್ತರದಿಂದ ಬೀಳುತ್ತದೆ. ಬೀಳುವ ನೀರಿನ ಪ್ರಮಾಣದ ಕಾರಣ ಅಹರ್ಬಾಲ್ ಜಲಪಾತವನ್ನು ಕಾಶ್ಮೀರದ ನಯಾಗರಾ ಜಲಪಾತ ಎಂದೂ ಕರೆಯಲಾಗುತ್ತದೆ. ಒಂದು ವರದಿಯ ಪ್ರಕಾರ,  ನೀರಿನ ಪರಿಮಾಣವು 100 ಮೆಗಾವ್ಯಾಟ್ ಜಲವಿದ್ಯುತ್ತನ್ನು ರಚಿಸಲು ಸೂಕ್ತವಾಗಿದೆ. ಜಲಪಾತಕ್ಕೆ ಕರೆದೊಯ್ಯುವ ತಾರಸಿಗಳಿಗೆ ಬೇಲಿ ಹಾಕಲಾಗಿದೆ, ಆದರೆ ಜಾರಿಬೀಳುವುದನ್ನು ತಪ್ಪಿಸಲು ಕಾಳಜಿ ವಹಿಸಬೇಕು.[][][][]

ಪ್ರವಾಸೋದ್ಯಮ

[ಬದಲಾಯಿಸಿ]

ಅಹರ್ಬಾಲ್ ಸಾಹಸ ಪ್ರವಾಸೋದ್ಯಮಕ್ಕೆ ಒಂದು ನೆಲೆಯಾಗಿದೆ. ವೇಶು ನದಿಯನ್ನು ಟ್ರೌಟ್ ಮೀನಿನಿಂದ ತುಂಬಿದೆ. ಮೀನುಗಾರಿಕೆ ಪರವಾನಗಿಯನ್ನು ಅಹರ್‌ಬಾಲ್‌ನಲ್ಲಿ ಇರುವ ಮೀನುಗಾರಿಕೆ ಇಲಾಖೆಯಿಂದ ಪಡೆಯಬಹುದು. ಕುಂಗ್‍ವತನ್‍ನ ಎತ್ತರದ ಹುಲ್ಲುಗಾವಲು ವೇಶು ಹೊಳೆಯ ಮೂಲವಾದ, ಎತ್ತರದ ಕೋಸರ್ನಾಗ್ ಸರೋವರಕ್ಕೆ ಎರಡು ದಿನಗಳ ಚಾರಣದ ಅರ್ಧದಾರಿಯಲ್ಲೇ ಸ್ಥಿತವಾಗಿದೆ. ಇತರ ಚಟುವಟಿಕೆಗಳಲ್ಲಿ ಕುದುರೆ ಸವಾರಿ, ಛಾಯಾಗ್ರಹಣ ಮತ್ತು ಚಳಿಗಾಲದಲ್ಲಿ ಸ್ಕೀಯಿಂಗ್ ಸೇರಿವೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

 

  1. "Hill stations in Kashmir". hillstations. Archived from the original on 2012-11-29. Retrieved 2012-11-26.
  2. Allan Stacey (1988). Visiting Kashmir. Hippocrene Books, 1988. p. 129. ISBN 978-0-87052-568-1. Retrieved 27 November 2012.
  3. "Niagara falls of Kashmir". greaterkashmir. Archived from the original on 2013-07-28. Retrieved 2012-11-26.
  4. "Tourist spots JK Tourism". The Economic Times. Retrieved 2012-11-27.
  5. "Girl jumps into Aharabal Falls". kashmirimages.com. Archived from the original on 2013-01-20. Retrieved 2012-11-26.

ಹೊರಗಿನ ಕೊಂಡಿಗಳು

[ಬದಲಾಯಿಸಿ]
External video
Aharbal Waterfall
Aharbal Waterfall on YouTube