ಆತ್ಮಸಂಯಮ
ಪ್ರತಿಬಂಧಕ ನಿಯಂತ್ರಣದ ಒಂದು ಅಂಶವಾಗಿರುವ ಆತ್ಮಸಂಯಮ ಪ್ರಲೋಭನೆಗಳು ಮತ್ತು ಒತ್ತರಗಳಿಗೆ ಎದುರಾಗಿ ಸ್ವಂತ ಭಾವನೆಗಳು, ಯೋಚನೆಗಳು, ಮತ್ತು ವರ್ತನೆಯನ್ನು ನಿಯಂತ್ರಿಸುವ ಸಾಮರ್ಥ್ಯ.[೧] ಕಾರ್ಯಕಾರಿ ಚಟುವಟಿಕೆಯಾಗಿ, ಆತ್ಮಸಂಯಮವು ನಿರ್ದಿಷ್ಟ ಗುರಿಗಳನ್ನು ಸಾಧಿಸಲು ಸ್ವಂತ ವರ್ತನೆಯನ್ನು ನಿಯಂತ್ರಿಸುವುದಕ್ಕೆ ಅಗತ್ಯವಾದ ಒಂದು ಅರಿವಿನ ಪ್ರಕ್ರಿಯೆ.
ಭಾವನಾತ್ಮಕ ಸ್ವಯಂ ನಿಯಂತ್ರಣ ಮನೋವಿಜ್ಞಾನದಲ್ಲಿ ಒಂದು ಸಂಬಂಧಿತ ಪರಿಕಲ್ಪನೆಯಾಗಿದೆ. ಆತ್ಮಸಂಯಮವು ಸ್ನಾಯುವಿದ್ದಂತೆ. ಅಧ್ಯಯನಗಳ ಪ್ರಕಾರ, ಭಾವನಾತ್ಮಕ ಅಥವಾ ವರ್ತನ ಆತ್ಮ ನಿಯಂತ್ರಣವು ಶಕ್ತಿಯಂತೆ ಕಾರ್ಯಮಾಡುವ ಸೀಮಿತ ಸಂಪನ್ಮೂಲವೆಂದು ಸಾಬೀತಾಗಿದೆ. ಅಲ್ಪಾವಧಿಯಲ್ಲಿ, ಆತ್ಮಸಂಯಮದ ಅತಿಯಾದ ಬಳಕೆ ಸವಕಳಿಗೆ ಕಾರಣವಾಗುತ್ತದೆ. ಆದರೆ, ದೀರ್ಘಾವಧಿಯಲ್ಲಿ, ಆತ್ಮಸಂಯಮದ ಬಳಕೆ ಕಾಲಕ್ರಮೇಣ ಬಲಗೊಳ್ಳಬಲ್ಲದು ಮತ್ತು ಸುಧಾರಿಸಬಲ್ಲದು.[೨]
ಬಯಕೆಯು ನಲಿವು ಅಥವಾ ಅಸಂತೋಷದಿಂದ ಉಪಶಮನಕ್ಕೆ ಸಂಬಂಧಿತವಾದ ಒಂದು ನಿರ್ದಿಷ್ಟ ವಸ್ತು, ವ್ಯಕ್ತಿ, ಅಥವಾ ಚಟುವಟಿಕೆಯೆಡೆಗಿನ ಒಂದು ಭಾವನಾತ್ಮಕವಾಗಿ ಶಕ್ತಿಹೊಂದಿದ ಪ್ರೇರಣೆ. ಬಯಕೆಯು ವ್ಯಕ್ತಿಯ ಆತ್ಮಸಂಯಮದ ಪ್ರದೇಶದ ಮೇಲೆ ಪ್ರಭಾವ ಬೀರಿದಾಗ ಅಥವ ಪ್ರವೇಶಿಸಿದಾಗ, ಅಥವಾ ಬಯಕೆಯ ಪರಿಣಾಮವಾದ ವರ್ತನೆಯು ಒಬ್ಬ ವ್ಯಕ್ತಿಯ ಮೌಲ್ಯಗಳು ಅಥವಾ ಇತರ ಆತ್ಮ ನಿಯಂತ್ರಣ ಗುರಿಗಳೊಂದಿಗೆ ಸಂಘರ್ಷಿಸಿದರೆ ಬಯಕೆಯು ಪ್ರಲೋಭನೆಯಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Matt DeLisi. "Chapter 10: Low Self-Control Is a Brain-Based Disorder". SAGE Publications Ltd. Retrieved 4 May 2014.
- ↑ Longitudinal Improvement of Self-Regulation Through Practice: Building Self-Control Strength Through Repeated Exercise. (Muraven, M., Baumeister, R. F., & Tice, D. M.)