ದುರ್ಯೋಧನ
ಗೋಚರ
ದುರ್ಯೋಧನ | |
---|---|
ಯುವರಾಜ ದುರ್ಯೋಧನ | |
ಚಿತ್ರ:Duryodhana showing his army to Drona.jpg | |
ಗುರು ದ್ರೋಣಾಚಾರ್ಯರೊಂದಿಗೆ ದುರ್ಯೋಧನ | |
ಪೂರ್ವಾಧಿಕಾರಿ | ಯುಧಿಷ್ಠಿರ |
ರಾಣಿ | ಭಾನುಮತಿ ಮತ್ತು ಮಯೂರಿ |
ಸಂತಾನ | |
ಲಕ್ಷಣ ಕುಮಾರ ,ಇತರರು... | |
ರಾಜ ವಂಶ | ಕುರು |
ತಂದೆ | ಧೃತರಾಷ್ಟ್ರ |
ತಾಯಿ | ಗಾಂಧಾರಿ |
ಜನನ | ಹಸ್ತಿನಾಪುರ |
ಮರಣ | ಕುರುಕ್ಷೇತ್ರ |
ಧರ್ಮ | ಹಿಂದೂ, ಕ್ಷತ್ರಿಯ |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ದುರ್ಯೋಧನ (ಸಂಸ್ಕೃತ:दुर्योधन)ಮಹಾಭಾರತ ಕಥಾನಕದಲ್ಲಿ ಒಂದು ಪ್ರಮುಖ ಪಾತ್ರ.ಧೃತರಾಷ್ಟ್ರ ಮತ್ತು ಗಾಂಧಾರಿಯಿಂದ ನೂರು ಜನ ಪುತ್ರರು ಒಬ್ಬಳು ಪುತ್ರಿ. ಇವರೇ ಕೌರವರು ಎಂದು ಪ್ರಸಿದ್ಧರಾದವರು. ಮಗಳು ದುಶ್ಶಲೆ . ಇವರಲ್ಲಿ ದುರ್ಯೋಧನ ಮತ್ತು ದುಶ್ಶಾಸನ ಮೊದಲಿಬ್ಬರು.
- ದುರ್ಯೋಧನ ದೃತರಾಷ್ಟ್ರ ಹಾಗು ಗಾಂಧಾರಿಯರಿಗೆ ಜನಿಸಿದ ನೂರು ಪುತ್ರರಲ್ಲಿ ಹಿರಿಯವನು. ಹಸ್ತಿನಾಪುರದ ಕಾರ್ಯಕಾರಿ ಮಹಾರಾಜನ (ದೃತರಾಷ್ಟ್ರನ) ಹಿರಿಯ ಮಗನಾದರೂ, ಕಾಡಿನ ವಾಸದಿಂದ ಹಿಂದಿರುಗಿದ ಪಾಂಡವರ ಕಾರಣದಿಂದ ಯುವರಾಜನಾಗುವ ಅವಕಾಶ ಕೈ ತಪ್ಪಿ ಹೋಗುತ್ತದೆ. ಈ ಕಾರಣದಿಂದ ದುರ್ಯೋಧನ ಮನದಲ್ಲಿ ಪಾಂಡವರ ವಿರುದ್ಧ ದ್ವೇಷದ ಬೀಜ ಮೊಳಕೆ ಒಡೆಯುತ್ತದೆ. ಕರ್ಣನು ದುರ್ಯೋಧನನ ಆಪ್ತಮಿತ್ರ. ಪಾಂಡವರನ್ನು ವನವಾಸಕ್ಕೆ ಅಟ್ಟಿದ ನಂತರ ದುರ್ಯೋಧನ, ಕರ್ಣನ ಗಮನಾರ್ಹ ನೆರವಿನೊಂದಿಗೆ, ವಿಶ್ವದ ಎಲ್ಲ ದಿಕ್ಕಿನ ಎಲ್ಲ ರಾಜರನ್ನು ಮಣಿಸಿ, ದಿಗ್ವಿಜಯ ಯಾತ್ರೆ ನಡೆಸಿ, ಚಕ್ರವರ್ತಿಯಾಗುತ್ತಾನೆ.