ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ
ಧ್ಯೇಯ | ಸಂಸ್ಕೃತ: ಪ್ರಜ್ವಲಿತೋ ಜ್ಞಾನಮಯ ಪ್ರದೀಪಃ |
---|---|
Motto in English | ಜ್ಞಾನದ ದೀಪವನ್ನು ಪ್ರಜ್ವಲಿಸು |
ಪ್ರಕಾರ | Private un-aided engineering college |
ಸ್ಥಾಪನೆ | ೧೯೬೩ |
ಪ್ರಿನ್ಸಿಪಾಲ್ | Prof. B.S Sathyanarayana [೧] |
ಆಡಳಿತಾತ್ಮಕ ಸಿಬ್ಬಂಧಿ | ~300 |
ಪದವಿ ಶಿಕ್ಷಣ | ~3500 |
ಸ್ನಾತಕೋತ್ತರ ಶಿಕ್ಷಣ | ~250 |
ಸ್ಥಳ | ಬೆಂಗಳೂರು, ಕರ್ನಾಟಕ, ಭಾರತ 12°55′26.13″N 77°29′58.78″E / 12.9239250°N 77.4996611°E |
ಆವರಣ | ನಗರ ಪ್ರದೇಶ, 56 acres (230,000 m2), ಬೆಂಗಳೂರು ನಗರದಿಂದ ೧೩ ಕಿ.ಮಿ. |
ಮಾನ್ಯತೆಗಳು | VTU |
ಜಾಲತಾಣ | rvce.edu.in |
ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ (ಆರ್.ವೀ.ಸೀ.ಈ) ಬೆಂಗಳೂರಿನ ಮ್ಯಸೊರು ರಸ್ತೆಯಲ್ಲಿರುವ ಒಂದು ತಾಂತ್ರಿಕ ಮಹಾವಿದ್ಯಾಲಯ. ಈ ಮಹಾವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆಳಗೆ ಸ್ವಾತಂತ್ರ ಹೊಂದಿದೆ. ೧೯೬೩ ವರುಷದಲ್ಲಿ ಸ್ಥಾಪಿಸಲಾದ ಈ ಮಹಾವಿದ್ಯಾಲಯ ಬೀ.ಈ, ಬೀ.ಆರ್ಕ್, ಎಂ.ಟೆಕ್, ಎಂ.ಆರ್ಕ್ ಹಾಗೂ ಎಂ.ಸೀ.ಎ ಪದವಿಗಳನ್ನು ನೀಡುತ್ತದೆ.
ಜಾಗ
[ಬದಲಾಯಿಸಿ]ಮಹಾವಿದ್ಯಾಲಯವು ವೃಷಭಾವತಿ ನದಿಯ ದಡದಲ್ಲಿ ಇದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸುಮಾರು ೮ ಮೈಲಿಗಳ ದೊರದಲ್ಲಿದೆ. ೫೨ ಎಕರೆಗಳ ಪ್ರದೇಶದಲ್ಲಿ ಹರಡಿದೆ.
ವಿಭಾಗಗಳು
[ಬದಲಾಯಿಸಿ]ಪದವಿ
[ಬದಲಾಯಿಸಿ]- ವಿದ್ಯುನ್ಮಾನ ಮತ್ತು ಸಂವಹನ (Electronics and Communication)
- ಗಣಕ ವಿಜ್ಞಾನ (Computer Science)
- ಮಾಹಿತಿ ವಿಜ್ಞಾನ (Information Science)
- ಜೈವಿಕ ತಂತ್ರಜ್ಞಾನ (Biotechnology)
- ಸಿವಿಲ್
- ಮೆಕ್ಯಾನಿಕಲ್
- ಎಲೆಕ್ಟ್ರಿಕಲ್ ಮತ್ತು ವಿದ್ಯುನ್ಮಾನ
- ಸಾಧನಿಕ ತಂತ್ರಜ್ಞಾನ (Instrumentation Technology)
- ಇಂಡಸ್ಟ್ರಿಯಲ್ ತಂತ್ರಜ್ಞಾನ
ಸ್ನಾತಕೋತ್ತರ
[ಬದಲಾಯಿಸಿ]- ಗಣಕ ವಿಜ್ಞಾನದಲ್ಲಿ ಎಂ.ಟೆಕ್
- ಗಣಕ ವಿಜ್ಞಾನದಲ್ಲಿ ಎಂ.ಸಿ.ಎ
- ಎಂ. ಆರ್ಕ್
ಪ್ರವೇಶ
[ಬದಲಾಯಿಸಿ]ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.
ವಿದ್ಯಾರ್ಥಿನಿಲಯಗಳು
[ಬದಲಾಯಿಸಿ]- ವಿದ್ಯಾರ್ಥಿನಿಲಯ
- ವಿದ್ಯಾರ್ಥಿನಿಯರ ಹಾಸ್ಟೆಲ್
ವಿದ್ಯಾರ್ಥಿವೇತನ
[ಬದಲಾಯಿಸಿ]- ಅರ್ಹತೆ ವಿದ್ಯಾರ್ಥಿವೇತನ
- ರಕ್ಷಣಾ ವಿದ್ಯಾರ್ಥಿವೇತನ
- ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ
- ಯೋಜನೆ ವಿದ್ಯಾರ್ಥಿವೇತನ
- ಆಯಾ ರಾಜ್ಯ ಸರ್ಕಾರದ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
- ಮೆಟ್ರಿಕ್ ವಿದ್ಯಾರ್ಥಿ ವಿದ್ಯಾರ್ಥಿವೇತನ
- ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿವೇತನ
- ರಾಷ್ಟ್ರೀಯ ಸಾಲ ವಿದ್ಯಾರ್ಥಿವೇತನ
- ಮಾಜಿ ರಕ್ಷಣಾ ವಿದ್ಯಾರ್ಥಿವೇತನ
- ಅಂಗವಿಕಲರ ವಿದ್ಯಾರ್ಥಿವೇತನ
ಜೀವನ ಮಾರ್ಗದರ್ಶನ ಕೇಂದ್ರ
[ಬದಲಾಯಿಸಿ]ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.
ಸೌಲಭ್ಯಗಳು
[ಬದಲಾಯಿಸಿ]ಈ ಮಹಾವಿದ್ಯಾಲಯದಲ್ಲಿ ೧೨ ವಿಭಾಗಗಳು ಇವೆ. ಮುಖ್ಯ ಗ್ರಂಥಾಲಯವಲ್ಲದೆ ಪ್ರತೀ ವಿಭಾಗಕ್ಕೂ ತನ್ನದೇ ಒಂದು ಗ್ರಂಥಾಲಯವಿದೆ.
- ↑ "Principal profile". RVCE, Bangalore. 5 Aug 2009. Archived from the original on 27 ನವೆಂಬರ್ 2010. Retrieved 9 January 2011.