ಮರಸೌತೆ
Kigelia africana | |
---|---|
ಮರಸೌತೆ ಆವಾಸಸ್ಥಾನ, ಹಣ್ಣು, ಹೂವು ಮತ್ತು ಬೀಜಗಳು | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಲ್ಯಾಮಿಯೇಲ್ಸ್ |
ಕುಟುಂಬ: | ಬಿಗ್ನೋನಿಯೇಸೀ |
ಏಕಮೂಲ ವರ್ಗ: | ಕ್ರೆಸೆಂಟೀನಾ |
ಏಕಮೂಲ ವರ್ಗ: | ಪ್ರಾಗೋಷ್ಣವಲಯದ ಏಕಮೂಲ ವರ್ಗ |
ಕುಲ: | ಕೈಜೀಲಿಯಾ DC. |
ಪ್ರಜಾತಿ: | K. africana
|
Binomial name | |
Kigelia africana |
ಮರಸೌತೆ ಬಿಗ್ನೋನಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ (ಸಾಸಿಜ್ ಟ್ರೀ). ಆಫ್ರಿಕ ಇದರ ತವರು. ಸಸ್ಯ ವೈಜ್ಞಾನಿಕ ಹೆಸರು ಕೈಜೀಲಿಯ ಪಿನ್ನೇಟ.
ಸಸ್ಯದ ವಿವರಣೆ
[ಬದಲಾಯಿಸಿ]ಇದು ಸುಮಾರು 15 ಮೀ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರ. ಮುಖ್ಯಕಾಂಡ ಅಷ್ಟು ಉದ್ದ ಇರುವುದಿಲ್ಲವಾದರೂ ರೆಂಬೆಕೊಂಬೆಗಳು ನೀಳವಾಗಿದ್ದು ಜೋಲು ಬಿದ್ದಿರುವುವು. ಮರದ ತೊಗಟೆ ಕಂದು ಮಿಶ್ರಿತ ಬೂದು; ಒರಟಾಗಿದೆ. ಎಲೆಗಳು ಸಂಯುಕ್ತ ಏಕಪಿಚ್ಛಕ ಮಾದರಿಯವು. ಒಂದೊಂದು ಎಲೆಯಲ್ಲೂ 7-9 ಅಂಡಾಕಾರ ಕಿರುಎಲೆಗಳಿವೆ. ಹೂಗಳು ಚಾಕಲೇಟ್ ಕೆಂಪು ಬಣ್ಣದವು; ತೂಗುಬಿದ್ದಿರುವ ಪ್ಯಾನಿಕಲ್ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳು ರಾತ್ರಿವೇಳೆ ಅರಳಿ, ಬೆಳಗಿನ ಹೊತ್ತು ಉದುರುವುವು. ಕಾಯಿಗಳು ಬಲುದೊಡ್ಡ ಗಾತ್ರದವು; ಒಂದೊಂದರ ಉದ್ದ ಸುಮಾರು 45 ಸೆಂ.ಮೀ, ವ್ಯಾಸ ಸುಮಾರು 12 ಸೆಂಮೀ. ಆಕಾರ ಸೌತೇಕಾಯಿಯಂತೆ. ಕಾಯಿ ಸಿಪ್ಪೆ ಬಲು ಮಂದ. ಒಳಗಿನ ತಿರುಳು ಮಾತ್ರ ಬಹಳ ಮೃದು. ಒಳಗೆ ಗುಂಡನೆಯ ಅನೇಕ ಬೀಜಗಳಿವೆ.
ಕೃಷಿ
[ಬದಲಾಯಿಸಿ]ಇದನ್ನು ಬೀಜಗಳಿಂದ ವೃದ್ಧಿಸಲಾಗುತ್ತದೆ. ಗೆಲ್ಲುಗಳಿಂದ ಕೂಡ ಬೆಳೆಸಬಹುದು.
ಉಪಯೋಗಗಳು
[ಬದಲಾಯಿಸಿ]ಅಲಂಕಾರಕ್ಕಾಗಿ ಮಾತ್ರವಲ್ಲದೆ ಮರಸೌತೆ ನಾಟಿ ಔಷಧಿಕ್ರಮದಲ್ಲೂ ಪ್ರಸಿದ್ಧವಾಗಿದೆ. ಕಾಯಿಯನ್ನು ಸುಟ್ಟು ವ್ರಣ, ಸಿಫಿಲಿಸ್, ಸಂಧಿವಾತ ಚಿಕಿತ್ಸೆಗೆ ಬಳಸುವುದಿದೆ. ತೊಗಟೆ ಕೂಡ ಸಂಧಿವಾತ, ಅತಿಸಾರ ನಿವಾರಣೆಯಲ್ಲಿ ಬಳಕೆಯಾಗುತ್ತದೆ. ಬರಗಾಲದಲ್ಲಿ ಬೀಜಗಳನ್ನು ಹುರಿದು ಆಹಾರವಾಗಿ ಸೇವಿಸುವುದುಂಟು. ಚೌಬೀನೆ ತೊಲೆಯಾಗಿ ಆಸರೆಕಂಬವಾಗಿ ಒದಗುತ್ತದೆ. ಆಫ್ರಿಕದ ಕೆಲವು ಕಡೆ ಇದನ್ನು ಪವಿತ್ರಭಾವನೆಯಿಂದ ಕಾಣಲಾಗುತ್ತದೆ.
ಗ್ರಂಥಸೂಚಿ
[ಬದಲಾಯಿಸಿ]- del Hoyo, J., Elliott, A., & Sargatal, J., eds. (1997). Handbook of the Birds of the World 4: 415. Lynx Edicions.
- Huxley, A., ed. (1992). Kigelia. In The New RHS Dictionary of Gardening 2: 735. Macmillan.
ಹೊರಗಿನ ಕೊಂಡಿಗಳು
[ಬದಲಾಯಿಸಿ]- "Kigelia africana". Germplasm Resources Information Network (GRIN). Agricultural Research Service (ARS), United States Department of Agriculture (USDA).
- Travel Africa: Sausage Tree.
- Kigelia africana in West African plants - A Photo Guide.